
MADHU SUDDI NEWS
チャンネル登録者数 1.22万人
9226 回視聴 ・ 9いいね ・ 2025/08/26
ಧರ್ಮಸ್ಥಳ (Dharmasthala) ವಿರುದ್ಧ ಅಪಪ್ರಚಾರ ಪ್ರಕರಣದಲ್ಲಿ ಅಮಾಯಕ ಮಾಸ್ಕ್ ಮ್ಯಾನ್‌ನನ್ನು ಬಲಿ ಕೊಡ್ತಿದ್ದಾರೆ ಎಂದು ಮಾಜಿ ಶಾಸಕ ಪಿ.ರಾಜೀವ್ (P Rajeev) ಹೇಳಿದ್ದಾರೆ.
ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್‌ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಿರಾಧಾರ ಆರೋಪ ಷಡ್ಯಂತ್ರವನ್ನ ಖಂಡಿಸಿ ಧರ್ಮ ಸಂರಕ್ಷಣಾ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಭಾಗಿಯಾಗಿ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಸುತ್ತಮುತ್ತ ಇರುವವರೇ ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ
ಸಿಎಂ ಕಾರ್ಯಾಲಯದವರೇ ಈ ಷಡ್ಯಂತ್ರ ಮಾಡಿರುವುದು. ಸಿಎಂ ಅಕ್ಕಪಕ್ಕ ಇರುವ ಎಡಪಂಥೀಯ ಆಲೋಚನೆ ಇರುವವರು ಷಡ್ಯಂತ್ರ ಮಾಡಿದ್ದಾರೆ. ಎಲ್ಲರೂ ದೆಹಲಿಯಲ್ಲಿ ಕುಳಿತು ಈ ಷಡ್ಯಂತ್ರ ಮಾಡಿದ್ದಾರೆ. ಈ ಬಗ್ಗೆ ಎನ್‌ಐಎ ತನಿಖೆ ಆಗಲಿ. ಎನ್‌ಐಎ ತನಿಖೆಯಾದರೆ ಪ್ರಕರಣದಲ್ಲಿ ಯಾರಿದ್ದಾರೆ? ಷಡ್ಯಂತ್ರ ರೂಪಿಸಿರುವವರು ಯಾರೂ? ಎಲ್ಲವೂ ಹೊರಗಡೆ ಬರುತ್ತದೆ ಎಂದಿದ್ದಾರೆ.
コメント
使用したサーバー: directk
コメントを取得中...